ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್‌ ಮುಂದುವರಿಯೋದು ಬೇಡ: ಬಡಗಲಪುರ ನಾಗೇಂದ್ರ

ಮೈಸೂರು: ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್‌ ಮುಂದುವರಿಯುವುದು ಬೇಡ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪವನ್ನು ನಟ ದರ್ಶನ್‌ ಹೊತ್ತಿದ್ದಾರೆ. ಕೃಷಿ ಸಚಿವರೂ ಕೂಡಾ ನಟರಾಗಿದ್ದವರು. ಹಾಗಾಗಿ, ದರ್ಶನ್ ನಡವಳಿಕೆ ತಿದ್ದುಕೊಳ್ಳುವಂತೆ ತಿಳಿ ಹೇಳಿ ಎಂದು ಸಲಹೆ ನೀಡಿದರು.

ತಲೆ ಕಟ್ ಮಾಡ್ತಿನಿ ಅನ್ನುವುದು, ಹಲ್ಲೆ ಮಾಡುವಂತಹದ್ದು ಸರಿಯಲ್ಲ. ಹೀಗೆ ಮಾತನಾಡುವುದು ರೈತ ಸಂಸ್ಕೃತಿ ಅಲ್ಲ. ಸಮಾಜದಲ್ಲಿ ದರ್ಶನ್ ನಡುವಳಿಕೆ ತಪ್ಪು ಎಂದು ತಿಳಿಸಿದರು.

× Chat with us