ಕೆ.ಆರ್‌.ಪೇಟೆ: ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಸಾವು

ಕೃಷ್ಣರಾಜಪೇಟೆ: ತಾಲ್ಲೂಕಿನ ಕೊಟಗಹಳ್ಳಿ ಗ್ರಾಮದ ಬಳಿ ಜಲಸೂರು-ಬೆಂಗಳೂರು ಹೈವೆ ರಸ್ತೆಯಲ್ಲಿ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ನಡೆದಿದೆ.
ಕೊಟಗಹಳ್ಳಿ ಗ್ರಾಮದ ಮಂಜುನಾಥ್ ಅವರ ಪತ್ನಿ ಪೂಜಾ (40) ಹಾಗೂ ಮಂಜುನಾಥ್ ಸಹೋದರಿ ಶ್ವೇತಾ(25) ಮೃತ ದುರ್ದೈವಿಗಳು.
ಮಾನವೀಯತೆ ಮೆರೆದ ಜೆಡಿಎಸ್ ಮುಖಂಡ ಹೆಚ್.ಟಿ.ಮಂಜು: ಕೆ.ಆರ್.ಪೇಟೆ ತಾಲ್ಲೂಕಿನ ಜೆಡಿಎಸ್ ಯುವ ನಾಯಕ ಹೆಚ್‌.ಟಿ.ಮಂಜು ಅವರು ಇದೇ ಮಾರ್ಗವಾಗಿ ಜನತಾಜಲಧಾರೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಕೊಟಗಹಳ್ಳಿ ಬಳಿ ಜನ ಗುಂಪುಗೂಡಿರುವುದನ್ನು ನೋಡಿ ತಕ್ಷಣ ಕಾರಿನಿಂದ ಕೆಳಗಿಳಿದು ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇದಕ್ಕೂ ಮುನ್ನ ಗಾಯಗೊಂಡಿದ್ದ ಶ್ವೇತಾ ಅವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿ ಮಾನವೀಯತೆ ಮೆರೆದರು.
ಇದಲ್ಲದೇ ಅಪಘಾತ ನಡೆಸಿ ಪರಾರಿಯಾಗುತ್ತಿದ್ದ ವಾಹನವನ್ನು ತಡೆಹಿಡಿದು ವಾಹನಕ್ಕೆ ವಿಮೆ ಹಾಗೂ ದಾಖಲಾತಿ ಇದೆಯೇ, ಚಾಲಕನಿಗೆ ಡಿ.ಎಲ್.ಇದೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಮೃತ ಕುಟುಂಬದವರಿಗೆ ಸಾಂತ್ವನ ಹೇಳಿ ಒಲ್ಲದ ಮನಸ್ಸಿನಿಂದ ಜನತಾ ಜಲಧಾರೆ ಕಾರ್ಯಕ್ರಮದತ್ತ ಪ್ರಯಾಣ ಬೆಳೆಸಿದರು