ಅಬಿದ್ ಸುರತಿ ಎಂಬ ‘ಒನ್ ಮ್ಯಾನ್ ಎನ್‌ಜಿಓ’!

15 ವರ್ಷಗಳಲ್ಲಿ ಹತ್ತು ದಶಲಕ್ಷ ಲೀಟರ್ ಕುಡಿಯುವ ನೀರು ಸೋರಿಕೆಯನ್ನು ತಡೆದಿದ್ದಾರೆ!

85 ವರ್ಷ ಪ್ರಾಯದ ಅಬಿದ್ ಸುರತಿ ಹಿಂದಿಯ ಹೆಸರಾಂತ ಸಾಹಿತಿ. ಹಿಂದಿ ಮಾತ್ರವಲ್ಲದೆ ಗುಜರಾತಿ ಮತ್ತು ಉರ್ದುವಲ್ಲೂ ಬರೆಯುತ್ತಾರೆ. ಜತೆಯಲ್ಲಿ ಒಬ್ಬ ಕಾರ್ಟೂನಿಸ್ಟ್, ನಾಟಕಕಾರ, ಪತ್ರಕರ್ತನೂ ಹೌದು. ಸಿನಿಮಾ ಮತ್ತು ಟಿವಿ ಸ್ಕ್ರಿಪ್ಟ್‌ಗಳನ್ನೂ ಬರೆಯುವುದುಂಟು. 2007ರಲ್ಲಿ ಉತ್ತರ ಪ್ರದೇಶ ಸರ್ಕಾರ ಇವರಿಗೆ ಹಿಂದಿ ಸಾಹಿತ್ಯ ಸಂಸ್ಥಾ ಪ್ರಶಸ್ತಿ ನೀಡಿದ್ದರೆ, ಗುಜರಾತ್ ಸರ್ಕಾರವು ಇವರ ಮಕ್ಕಳ ಸಾಹಿತ್ಯವನ್ನು ಗುರುತಿಸಿ ಗುಜರಾತ್ ಗೌರವ್ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಹಲವು ವರ್ಷಗಳ ಕಾಲ ಇವರು ‘ದಯಾರೋ’ ಎಂಬ ಗುಜರಾತಿ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.

ಗುಜರಾತಿ ಮನೆಮಾತಾಗಿರುವ ಅಬಿದ್ ಸುರತಿಯವರ ತಂದೆ ಸೂಫಿ ತತ್ವದ ಅನುಯಾಯಿ. ಮುಂಬೈಯ ಪ್ರಖ್ಯಾತ ಜೆಜೆ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಮಾಡಿದ ಸುರತಿಯವರು ಒಬ್ಬ ಫ್ರೀಲ್ಯಾನ್ಸರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸುರತಿಯವರು ಲೇಖಕನಾದುದು ಒಂದು ಆಕಸ್ಮಿಕ. ಅವರ ಪ್ರಥಮ ಪ್ರೇಮ ಪ್ರಕರಣ ಮನೆಯವರ ಒತ್ತಡದಿಂದಾಗಿ ವಿಫಲವಾದಾಗ ಆ ನೋವನ್ನು ಬೇರಾರಲ್ಲೂ ಹೇಳಿಕೊಳ್ಳಲಾಗದೆ ಒಂದು ನೋಟ್‌ಬುಕ್ಕಿನಲ್ಲಿ ಬರೆದರು. ಹೀಗೆ ಬರೆದ ವಿಫಲ ಪ್ರೇಮ ಪ್ರಕರಣದ ವೃತ್ತಾಂತಕ್ಕೆ ಮುಂದೆ ಅವರು ಒಂದು ಕಾದಂಬರಿಯ ರೂಪ ಕೊಟ್ಟು ೧೯೬೫ರಲ್ಲಿ ಗುಜರಾತಿಯಲ್ಲಿ ‘ಟೂಟೆಲಾ ಫರಿಸ್ತಾ’ ಎಂಬ ಹೆಸರಿನಲ್ಲಿ ಪ್ರಕಟಗೊಂಡು ತುಂಬಾ ಜನಮನ್ನಣೆ ಪಡೆಯಿತು. ಅಲ್ಲಿಂದ ಶುರುವಾದ ಸುರತಿಯವರ ಬರವಣಿಗೆ ಈವರೆಗೆ ೮೦ ಸಾಹಿತ್ಯ ಕೃತಿಗಳನ್ನು ಹುಟ್ಟುಹಾಕಿದೆ. ಅವುಗಳಲ್ಲಿ ಹೆಚ್ಚಿನವು ಇಂಗ್ಲಿಷೂ ಸೇರಿ ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅವರ ಹೆಚ್ಚಿನ ಸಾಹಿತ್ಯ ಕೃತಿಗಳಲ್ಲಿ ಬಂಗಾಳಿಯ ಖ್ಯಾತ ಲೇಖಕ ಶರತ್ ಚಂದ್ರ ಚಟರ್ಜಿಯವರ ಪ್ರಭಾವ ಕಾಣಿಸುತ್ತದೆ

1975ರಲ್ಲಿ, ‘ಸೈತಾನನ ಬೈಬಲ್(ಡೆವಿಲ್ಸ್ ಬೈಬಲ್)’ನ್ನು ಆಧರಿಸಿ ಬರೆದ ಅವರ ‘ದಿ ಬ್ಲ್ಯಾಕ್ ಬುಕ್’ ಎಂಬ ಕಾದಂಬರಿ ತೀವ್ರವಾದ ವಿವಾದಕ್ಕೆ ಒಳಗಾಗಿ ಅವರು ‘ಭಾರತದ ಸಲ್ಮಾನ್ ರಶ್ಡಿ’ ಎಂದು ಕರೆಯಲ್ಪಟ್ಟರು. ರಶ್ಡಿಯವರ ‘ದಿ ಸೆಟಾನಿಕ್ ವರ್ಸಸ್’ನ್ನು ನೆನಪಿಸುವ ಈ ಪುಸ್ತಕ ಕನ್ನಡವೂ ಸೇರಿ ಏಳು ಭಾಷೆಗಳಿಗೆ ಅನುವಾದಗೊಂಡು, 1975ರಲ್ಲಿ ಕನ್ನಡದ ‘ವರ್ಷದ ಪುಸ್ತಕ’ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ‘ಮುಸಲ್ಮಾನ್’ ಎಂಬುದು ಇವರ ಜೀವನವನ್ನು ಆಧಾರಿತ ಕಾದಂಬರಿ. ಇದರಲ್ಲಿ ಅಬಿದ್ ಸುರತಿಯವರು ಹಾಜಿ ಮಸ್ತಾನ್, ಕರೀಂ ಲಾಲಾ, ದಾವುದ್ ಇಬ್ರಾಹಿಂ ಮೊದಲಾದ ಅಂಡರ್ ವರ್ಲ್ಡ್ ಕಿಂಗ್‌ಗಳ ತವರುಮನೆ ಮುಂಬೈಯ ಡೊಂಗ್ರಿ ಎಂಬಲ್ಲಿ ಬಡತನದ ಬೇಗೆಯಲ್ಲಿ ಕಳೆದ ತನ್ನ ಜೀವನ ವೃತ್ತಾಂತವನ್ನು ಬರೆದಿದ್ದಾರೆ. ಇವರ ‘ತೀಸ್ರಿ ಆಂಖ್’ ಎಂಬುದು ೧೯೯೩ರ ರಾಷ್ಟ್ರಪತಿ ಪ್ರಶಸ್ತಿ ಪಡೆದ ಕಥಾ ಸಂಕಲನ. ಇವರನ್ನು ‘ಭಾರತದ ಕಾಮಿಕ್ ಪಿತಾಮಹ’ ಎಂದೂ ಕರೆಯಲಾಗುತ್ತದೆ. ಡಬ್ಬೂಜಿ, ಬಹದೂರ್, ಇನ್‌ಸ್ಪೆಕ್ಟರ್ ಆಜಾದ್, ಇನ್‌ಸ್ಪೆಕ್ಟರ್ ವಿಕ್ರಂ, ಶೂಜಾ ಮೊದಲಾದ ಕಾರ್ಟೂನ್ ಪಾತ್ರಗಳನ್ನು ಸೃಷ್ಟಿಸಿದವರು ಇವರೇ. ಇಷ್ಟೇ ಅಲ್ಲದೆ, ಇವರು ೧೫ ಮಕ್ಕಳ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅಬಿದ್ ಸುರತಿಯವರ ಇನ್ನೊಂದು ವಿಶೇಷತೆೆುಂಂದರೆ ಇವರು ಹಿಂದಿ, ಗುಜರಾತಿ ಮತ್ತು ಉರ್ದು ಮೂರು ಭಾಷೆಗಳಲ್ಲಿ ಬರೆಯಬಲ್ಲರು.

ಅಬಿದ್ ಸುರತಿಯವರು ಸಾಹಿತಿ, ಕಾರ್ಟೂನಿಸ್ಟ್, ನಾಟಕಕಾರ, ಪತ್ರಕರ್ತ ಸ್ಕ್ರಿಪ್ಟ್ ರೈಟರ್ ಆಗಿರುವ ಜೊತೆಯಲ್ಲಿ ಒಬ್ಬ ವಿಶಿಷ್ಟ ರೀತಿಯ ಪರಿಸರಪ್ರೇಮಿಯೂ ಹೌದು. ಭಾನುವಾರ ಬೆಳಗಾಯಿತೆಂದರೆ ಒಬ್ಬ ಪ್ಲಂಬರ್ ಹಾಗೂ ಇನ್ನೊಬ್ಬಳು ಸ್ವಯಂ ಸೇವಕಿಯನ್ನು ಜತೆಯಲ್ಲಿರಿಸಿಕೊಂಡು ಮುಂಬೈಯ ಮೀರಾರೋಡಿನ ತಮ್ಮ ಮನೆಯಿಂದ ಹೊರ ಬೀಳುತ್ತಾರೆ. ಹೀಗೆ ಮನೆಯಿಂದ ಹೊರ ಬಂದವರು ಅಕ್ಕಪಕ್ಕದ ಮನೆಗಳ ಬಾಗಿಲ ಬೆಲ್ ಒತ್ತುತ್ತಾರೆ. ಮನೆಯವರು ಬಾಗಿಲು ತೆರೆದಾಗ ‘ನಿಮ್ಮ ಮನೆಯ ನೀರಿನ ನಲ್ಲಿ ಸೋರುತ್ತಿದೆೆುೀಂ?’ ಎಂದು ಕೇಳುತ್ತಾರೆ. ಮನೆಯವರು ಹೌದು ಎಂದು ಉತ್ತರಿಸಿದರೆ ಅಬಿದ್ ಸುರತಿ, ಅವರ ಅನುಮತಿ ಪಡೆದು, ಸೀದಾ ಸೋರುವ ನಲ್ಲಿ ಬಳಿ ಹೋಗಿ ತಮ್ಮ ಜೊತೆಗಿರುವ ಪ್ಲಂಬರ್ ಸಹಾಯದಿಂದ ಅದನ್ನು ಸರಿಪಡಿಸುತ್ತಾರೆ. ಅಲ್ಲಿಂದ ಬರುವಾಗ ಮನೆಯವರಿಗೆ ನೀರು ಉಳಿಸುವ ಪ್ರಾಮುಖ್ಯತೆಯನ್ನು ತಿಳಿ ಹೇಳಿ, ‘ಸೇವ್ ಎವ್ರಿ ಡ್ರಾಪ್ ಆರ್ ಡ್ರಾಪ್ ಡೆಡ್’ ಎಂದು ಇಂಗ್ಲಿಷಿನಲ್ಲಿ ಬರೆದ ಪೋಸ್ಟರನ್ನು ಮನೆಯ ಗೋಡೆಗೆ ಅಂಟಿಸಿ ಬರುತ್ತಾರೆ.
ಅಬಿದ್ ಸುರತಿಯವರು 2007ರಿಂದ ಹೀಗೆ ಮನೆಮನೆಗಳಿಗೆ ಹೋಗಿ ಸೋರುವ ನಲ್ಲಿಗಳನ್ನು ತಮ್ಮದೇ ಖರ್ಚಿನಿಂದ ಸರಿಪಡಿಸಿ ನೀರು ಉಳಿಸುವ ಈ ವಿನೂತನ ಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರ ಪ್ರಕಾರ ಒಂದು ನಲ್ಲಿಯಿಂದ ಪ್ರತಿ ಸೆಕೆಂಡಿಗೆ ಒಂದು ಹನಿ ನೀರು ಪೋಲಾದರೆ ತಿಂಗಳಿಗೆ ಸುಮಾರು 1,000 ಲೀಟರ್ ನೀರು ವ್ಯರ್ಥವಾಗಿ ಚರಂಡಿ ಸೇರುತ್ತದೆ. ಈ ಲೆಕ್ಕಾಚಾರದಂತೆ ಸುರತಿಯವರು ಕಳೆದ 15 ವರ್ಷಗಳಲ್ಲಿ ಕನಿಷ್ಠವೆಂದರೆ ಹತ್ತು ದಶಲಕ್ಷ ಲೀಟರ್ ಕುಡಿಯುವ ನೀರು ವ್ಯರ್ಥವಾಗಿ ಸೋರಿ ಹೋಗುವುದರಿಂದ ಉಳಿಸಿದ್ದಾರೆ. ಈ ಉದ್ದೇಶಕ್ಕಾಗಿಯೇ ಅವರು ‘ಡ್ರಾಪ್ ಡೆಡ್’ ಎಂಬ ತನ್ನದೇ ಒಂದು ಎನ್‌ಜಿಓವನ್ನು ಹುಟ್ಟು ಹಾಕಿದ್ದಾರೆ.

ಅಬಿದ್ ಸುರತಿಯವರು ಸಾಹಿತಿ, ಕಾರ್ಟೂನಿಸ್ಟ್, ನಾಟಕಕಾರ, ಪತ್ರಕರ್ತ ಸ್ಕ್ರಿಪ್ಟ್ ರೈಟರ್ ಆಗಿರುವ ಜೊತೆಯಲ್ಲಿ ಒಬ್ಬ ವಿಶಿಷ್ಟ ರೀತಿಯ ಪರಿಸರಪ್ರೇಮಿಯೂ ಹೌದು. ಭಾನುವಾರ ಬೆಳಗಾಯಿತೆಂದರೆ ಒಬ್ಬ ಪ್ಲಂಬರ್ ಹಾಗೂ ಇನ್ನೊಬ್ಬಳು ಸ್ವಯಂ ಸೇವಕಿಯನ್ನು ಜತೆಯಲ್ಲಿರಿಸಿಕೊಂಡು ಮುಂಬೈಯ ಮೀರಾರೋಡಿನ ತಮ್ಮ ಮನೆಯಿಂದ ಹೊರ ಬೀಳುತ್ತಾರೆ. ಹೀಗೆ ಮನೆಯಿಂದ ಹೊರ ಬಂದವರು ಅಕ್ಕಪಕ್ಕದ ಮನೆಗಳ ಬಾಗಿಲ ಬೆಲ್ ಒತ್ತುತ್ತಾರೆ. ಮನೆಯವರು ಬಾಗಿಲು ತೆರೆದಾಗ ‘ನಿಮ್ಮ ಮನೆಯ ನೀರಿನ ನಲ್ಲಿ ಸೋರುತ್ತಿದೆೆಯೇ?’ ಎಂದು ಕೇಳುತ್ತಾರೆ. ಮನೆಯವರು ಹೌದು ಎಂದು ಉತ್ತರಿಸಿದರೆ ಅಬಿದ್ ಸುರತಿ, ಅವರ ಅನುಮತಿ ಪಡೆದು, ಸೀದಾ ಸೋರುವ ನಲ್ಲಿ ಬಳಿ ಹೋಗಿ ತಮ್ಮ ಜೊತೆಗಿರುವ ಪ್ಲಂಬರ್ ಸಹಾಯದಿಂದ ಅದನ್ನು ಸರಿಪಡಿಸುತ್ತಾರೆ.