ಆಮ್‌ ಆದ್ಮಿ ಪಕ್ಷ ಸೇರಿ ಟ್ರೋಲ್ ಗೆ ಒಳಗಾದ್ರ ನಟಿ ಕಂಗನಾ ?

ನಟಿ ಕಂಗನಾ ಶರ್ಮಾ ಗ್ರೇಟ್‌ ಗ್ರ್ಯಾಂಡ್‌ ಮಸ್ತಿ ಎಂಬ ಅಡಲ್ಟ್‌ ಕಾಮಿಡಿ ಸಿನಿಮಾದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದರು. ಸಾಕಷ್ಟು ಅವಕಾಶಗಳ ಬಾಗಿಲು ತೆರೆಯುವ ಹೊತ್ತಿನಲ್ಲೇ  ಮೊನ್ನೆಯಷ್ಟೇ (ಗುರುವಾರ) ಹರಿಯಾಣದಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್‌ ಟ್ರೋಲ್‌ ಗೆ ಒಳಗಾಗಿದ್ದಾರೆ.

ಹೌದು, ಕಂಗನಾರವರ ಹಾಟ್‌ ಹಾಟ್ ಪೋಟೋಗಳನ್ನು ಅಪ್ಲೋಡ್‌ ಮಾಡುವ ಮೂಲಕ ಆಮ್‌ ಆದ್ಮಿ ಪಕ್ಷ ಮತ್ತು ಕಂಗನಾ ಕುರಿತು ನಾನಾ ರೀತಿಯಾಗಿ ಟ್ರೋಲ್‌ ಮಾಡುತ್ತಿದ್ದಾರೆ.

‘ನಿಮ್ಮ ಪ್ರೀತಿ ಮತ್ತು ಬೆಂಬಲ ನಿರಂತರವಾಗಿರಲಿ. ನಿಮ್ಮೆಲ್ಲರಿಗೂ ಧನ್ಯವಾದಗಳು’ ಎಂದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರ ಬಗ್ಗೆ ಕಂಗನಾ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದರ ಕುರಿತು ಆಮ್‌ ಆದ್ಮಿ ಪಕ್ಷ ಕೂಡ ತನ್ನ ಅಧಿಕೃತ ಪೇಜ್‌ ನಲ್ಲಿ ಹಂಚಿಕೊಂಡಿತ್ತು.