ಅಮೆರಿಕ ಪ್ರತಿಷ್ಠೆ ಮಣ್ಣುಪಾಲು ಮಾಡಿದ ಉಗ್ರರ ದಿನ ಇಂದು: 9/11 ದಾಳಿಗೆ 20 ವರ್ಷ!

ವಾಷಿಂಗ್ಟನ್‌: ಅಮೆರಿಕದ ಗಗನಚುಂಬಿ ವಿಶ್ವ ವ್ಯಾಪಾರ ಸಂಸ್ಥೆ ಮೇಲೆ ಅಲ್‌ಖೈದಾ ಉಗ್ರರು ದಾಳಿ ನಡೆಸಿ ಇಂದಿಗೆ 20 ವರ್ಷಗಳು ತುಂಬಿವೆ. ಆ ಘೋರ ದಿನದ ಕಪ್ಪುಛಾಯೆ ಇನ್ನೂ ಮಾಸಿಲ್ಲ. ಅಮೆರಿಕದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿದ ದಿನ ಅದು.

ಈ ದಿನವನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಭಾವುಕರಾಗಿ ನೆನೆದಿದ್ದಾರೆ. ʻಅಮೆರಿಕಾದ ಸಾರ್ವಭೌಮತ್ವ ಮತ್ತು ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರರ ದಿನ ಇದು. ಈ ಸಂದರ್ಭದಲ್ಲಿ ಮೃತಪಟ್ಟ ಸಾವಿರಾರು ಮಂದಿಗೆ ಬೈಡೆನ್‌ ಶ್ರದ್ಧಾಂಜಲಿ ಸಲ್ಲಿಸಿ ಭಾಷಣ ಮಾಡಿದ್ದಾರೆ. ದಾಳಿಯಿಂದ ಐಕ್ಯತೆಯೇ ಶಕ್ತಿ ಎಂಬ ಪಾಠ ಕಲಿತೆವು. ಅಮೆರಿಕದ ರಾಷ್ಟ್ರೀಯ ಐಕ್ಯತೆಯೇ ದೊಡ್ಡ ಶಕ್ತಿ ಎಂದು ವಿಡಿಯೊ ಭಾಷಣದಲ್ಲಿ ಬೈಡೆನ್‌ ಹೇಳಿದ್ದಾರೆ.

ಅಲ್‌ಖೈದಾ ಉಗ್ರರು ಡಬ್ಲ್ಯೂಟಿಸಿ ಕಟ್ಟಡದ ಮೇಲೆ ವಿಮಾನ ನುಗ್ಗಿಸಿ ದಾಳಿ ನಡೆಸಿತು. ದಾಳಿಯಲ್ಲಿ ಸುಮಾರು 2,977 ಮಂದಿ ಪ್ರಾಣ ಕಳೆದುಕೊಂಡರು. ಇದರಿಂದ ಕೆರಳಿದ ಅಮೆರಿಕ, ಉಗ್ರರನ್ನು ನಿರ್ನಾಮ ಮಾಡುವ ನಿರ್ಧಾರ ಕೈಗೊಂಡಿತು. ಅಲ್‌ಖೈದಾ ನಾಯಕ ಒಸಾಮಾ ಬಿನ್‌ ಲಾಡೆನ್‌ನನ್ನು ಹತ್ಯೆ ಮಾಡಿತು. ದಾಳಿಯಲ್ಲಿ ಸಾವಿರಾರು ಮಂದಿ ಉಗ್ರರು ಹತರಾದರು.

ನಂತರ ಅಫ್ಗಾನಿಸ್ತಾನದಲ್ಲಿ ಅಮೆರಿಕ ತನ್ನ ಯೋಧರ ಪಡೆ ನಿಯೋಜಿಸಿತು. ಸುಮಾರು 20 ವರ್ಷಗಳ ನಂತರ ಈಗ ಅಮೆರಿಕ ಮತ್ತೆ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿದೆ. ಇದೇ ಸಂದರ್ಭದಲ್ಲಿ ತಾಲಿಬಾನ್‌ ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಮಾಡಿದೆ.

× Chat with us