ಗ್ರಾಮದ ಸಮುದಾಯ ಭವನದಲ್ಲಿ ಜೂಜಾಟ: 8 ಮಂದಿ ಬಂಧನ

ಹನೂರು: ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ವಶಕ್ಕೆ ಪಡೆದು ಠಾಣಾ ಜಮೀನಿನ ಮೇಲೆ ಬಿಡುಗಡೆಗೊಳಿಸಿರುವ ಘಟನೆ ನಡೆದಿದೆ.

ಬಂಡಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಇಸ್ಪೀಟ್ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ಸಬ್ ಇನ್‌ಸ್ಪೆಕ್ಟರ್ ನಾಗೇಶ್, ಮುಖ್ಯಪೇದೆ ಕೃಷ್ಣ, ಪೇದೆಗಳಾದ ರಾಘವೇಂದ್ರ, ರಾಮಶೆಟ್ಟಿ, ಬಿಳಿಗೌಡ, ರಾಜು ದಾಳಿ ನಡೆಸಿ ಪಣಕ್ಕಿಟ್ಟಿದ್ದ 11,220 ರೂ. ವಶಕ್ಕೆ ಪಡೆದು ೮ ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

× Chat with us