ಕ್ಷೇತ್ರದ ಅಭಿವೃದ್ಧಿಗೆ 50 ಕೋಟಿ ರೂ. ಬಿಡುಗಡೆ: ನಾಗೇಂದ್ರ

ಮೈಸೂರು: ಚಾಮರಾಜ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 50 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು.

ಹಿರಿಯ ನಾಗರಿಕರ ಮಂಡಳಿ ಹಾಗೂ ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿಯು ಭಾನುವಾರ ಜಯಲಕ್ಷಿ ್ಮೀಪುರಂ ಸರಸ್ವತಿ ಸಮುದಾಯ ಭವನದಲ್ಲಿ ಏಪರ್ಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಶಾಸಕನಾದ ಬಳಿಕ ಸುಮಾರು ೬೦೦ರಿಂದ 700 ಕೋಟಿ ರೂ. ಅನುದಾನ ತಂದಿ ದ್ದೇನೆ. ದೇವರಾಜ ಮಾರುಕಟ್ಟೆಯನ್ನು ಪುನರ್ ನಿರ್ಮಿಸಲು 140 ಕೋಟಿ ರೂ. ಅನ್ನು ಸಿಎಂ ಮಂಜೂರು ಮಾಡಿದ್ದಾರೆ. ಅಲ್ಲದೇ, ಲ್ಯಾನ್ಸ್‌ಡೌನ್ ಕಟ್ಟಡವನ್ನೂ ಮರು ನಿರ್ಮಿಸಲಾಗುವುದು. ಪಾರಂಪರಿಕತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಇದೇ ಸಂಧರ್ಭದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾಯಕ್ರಮದಲ್ಲಿ ಪ್ರೊ.ಸಿ.ನಾಗಣ್ಣ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಎಸ್.ವಿ.ಗೌಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ನಾಗರಿಕರ ಮಂಡಳಿ ಅಧ್ಯಕ್ಷ ಕೃಷ್ಣಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್.ಶ್ರೀಧರರಾಜೇ ಅರಸ್, ಸುಶೀಲಾ ಮರೀಗೌಡ, ಎನ್.ನಂಜೇಗೌಡ ಹಾಜರಿದ್ದರು. ಅತಿಥಿಗಳನ್ನು ಕೆ.ವಿ.ರಾಮನಾಥ್, ಸನ್ಮಾನಿತರನ್ನು ಡಾ.ಎಚ್.ಎಂ. ನಾಗರಾಜು, ಯಶಸ್ವಿನಿ, ಮಾದೇಗೌಡ, ವಿ.ಎನ್.ಆಚಾರ್, ಎಸ್.ವಿ.ವೆಂಕಟೇಶಯ್ಯ ಹಾಜರಿದ್ದರು.