ನಾಲೆಯಲ್ಲಿ ಈಜಲು ಹೋಗಿದ್ದ 3 ಯುವಕರು ನೀರುಪಾಲು!

ಮಂಡ್ಯ: ಜಿಲ್ಲೆಯ ಮಂದಗೆರೆ ಎಡದಂಡೆ ನಾಲೆಯಲ್ಲಿ ಈಜಲು ಹೋಗಿ ಮೂವರು ಯುವಕರು ನೀರುಪಾಲದ ದುರ್ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.

ಈ ದುರಂತದಲ್ಲಿ ಮೈಸೂರಿನ ಕುಂಬಾರಕೊಪ್ಪಲಿನ ಮಂಜು (೨೦), ಮೊಗರಹಳ್ಳಿ ಮಂಡ್ಯದ ನಿವಾಸಿ, ಆಟೋ ಚಾಲಕ ರವಿ (27) ಮತ್ತು ಲೋಕನಾಯಕ ನಗರದ ರವಿ (22) ಜಲಸಮಾಧಿಯಾದ ದುರ್ದೈವಿಗಳು.

ಮಂಡ್ಯದ ಶ್ರೀ ಚಂದಗೋಳಮ್ಮನವರ ಕ್ಷೇತ್ರಕ್ಕೆ ಬಂದಿದ್ದ ಎಂಟು ಯುವಕ ಪೈಕಿ ಈ ಮೂವರು ನಾಟನಹಳ್ಳಿ ಬಳಿ ಮಂದಗೆರೆ ಎಡದಂಡೆ ನಾಲೆಯಲ್ಲಿ ಈಜಲು ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ.

ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ಠಾಣಾಧಿಕಾರಿ ಶಿವಣ್ಣ ಅವರ ನೇತೃತ್ವದಲ್ಲಿ ಸತತ ಕಾರ್ಯಾಚರಣೆ ನಡೆಸಿದರೂ ಕತ್ತಲಾದ ಹಿನ್ನೆಲೆಯಲ್ಲಿ ಮೃತ ಯುವಕರ ದೇಹಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

× Chat with us