ಮೈಸೂರಿಗೆ ಬರುತ್ತಿದ್ದ ಟೆಂಪೋ ಪಲ್ಟಿ: ಮೂವರು ದುರ್ಮರಣ!

ಚಾಮರಾಜನಗರ: ಬೆಳ್ಳಂಬೆಳಿಗ್ಗೆ ಸಂಭವಿಸಿದ ರಸ್ತೆ ಅಘಾತದಲ್ಲಿ ಮೂವರು ದುರ್ಮರಣಕ್ಕೀಡಾಗಿರುವ ಘಟನೆ ಚಾಮರಾಜನಗರದ ಸುವರ್ಣವತಿ ಡ್ಯಾಂ ಬಳಿ ಶುಕ್ರವಾರ ನಡೆದಿದೆ.

ತಿರುಪುರ್‌ನಿಂದ ಮೈಸೂರಿಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್‌ ರಾಷ್ಟ್ರೀಯ ಹೆದ್ದಾರಿ 209 ರ ಗುಡಿ ಬೋರೆ ಎಂಬಲ್ಲಿ ಪಲ್ಟಿ ಹೊಡೆದಿದೆ. ಇದರಲ್ಲಿ 14 ಜನ ಪ್ರಯಾಣಿಸುತ್ತಿದ್ದರು. ಟೆಂಪೋದಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, 11 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು

ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

× Chat with us