ಕರೆಂಟ್ ಹೊಡೆದು 22 ವರ್ಷದ ಯುವಕ ಸಾವು

ಚಾಮರಾಜನಗರ: ಕರೆಂಟ್ ಹೊಡೆದು 22 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಚಾಮರಾಜನಗರದ ಕಾಮಗೆರೆಯಲ್ಲಿ ನಡೆದಿದೆ.
ಹೊಸ ಮನೆಗೆ ಟೈಲ್ಸ್ ಕೆಲಸಕ್ಕೆ ಹೋಗಿದ್ದಾಗ, ಸ್ವಿಚ್ ಹಾಕಲು ಹೋಗಿ ಆಕಸ್ಮಿಕವಾಗಿ ಕರೆಂಟ್ ಹೊಡೆದಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಾಗಿ ಒಂದು ಗಂಟೆಯ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಈವರೆಗೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

× Chat with us