2 ಹುಲಿ ಮರಿಗಳ ಮೃತದೇಹಗಳು ಪತ್ತೆ

ಅಂತರಸಂತೆ : ಎಚ್‌.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಉದ್ಯಾನವನದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದಲ್ಲಿ ಎರಡು ಹುಲಿ ಮರಿಗಳ ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ.

ಹುಲಿ ಗಣತಿ ವೇಳೆ 8 ರಿಂದ 9 ತಿಂಗಳು ವಯಸ್ಸಿನ ಎರಡೂ ಹುಲಿ ಮರಿಗಳು ಮತ್ತೊಂದು ಹುಲಿಯ ದಾಳಿಯಿಂದ ಮೃತಪಟ್ಟಿರುವುದು ತಿಳಿದು ಬಂದಿದೆ ಎನ್ನಲಾಗಿದೆ.

ಇದಕ್ಕೆ ಪೂರಕ ಎನ್ನುವಂತೆ ದೇಹದ ಮೇಲೆ ಪರಚಿದ ಗಾಯಗಳು ಕಂಡು ಬಂದಿದ್ದು, ಇದರಲ್ಲಿ ಒಂದು ಹುಲಿ ಮರಿ ಗಂಡಾಗಿದ್ದು, ಮತ್ತೊಂದು ಹುಲಿಯ ದೇಹದ ಭಾಗಗಳನ್ನು ಪ್ರಾಣಿಗಳು ತಿಂದಿರುವುದರಿಂದ ಲಿಂಗ ಪತ್ತೆಯಾಗಿಲ್ಲ. ಡಿಎನ್ಎ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.