ಪಾಕಿಸ್ತಾನ: ಸಿಡಿಲು ಬಡಿದು ಮಕ್ಕಳೂ ಸೇರಿ 17 ಮಂದಿ ಬಲಿ

ಖೈಬರ್ ಕಣಿವೆ: ಪಾಕಿಸ್ತಾನದದ ವಾಯುವ್ಯ ಭಾಗದಲ್ಲಿರುವ ಗ್ರಾಮವೊಂದರಲ್ಲಿ ಭಾನುವಾರ ರಾತ್ರಿ ಮೂರು ಮನೆಗಳಿಗೆ ಸಿಡಿಲು ಬಡಿದು ಮಹಿಳೆಯರು ಮತ್ತು ಮಕ್ಕಳು ಸೇರಿ 17 ಮಂದಿ ಮೃತಪಟ್ಟಿದ್ದಾರೆ. ಮೂರೂ ಮನೆಗಳೂ ಜಖಂಗೊಂಡಿದ್ದು, ಕೆಲವರಿಗೆ ಗಾಯಗಳಾಗಿವೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ತೋರ್ಗಡ್ ಎಂಬ ಹಳ್ಳಿಯಲ್ಲಿ ಮೂರು ಮಣ್ಣಿನ ಮನೆಗಳಿಗೆ ಸಿಡಿಲು ಬಡಿದು ಅವಘಡ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಡಿಲಿನಿಂದಾಗಿ ಮೂರು ಮನೆಗಳೂ ಕುಸಿದುಬಿದ್ದಿದ್ದು, ಅದರ ಅವಶೇಷಗಳಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇಲ್ಲಿಗೆ ಆಗಮಿಸಿದ್ದ ರಕ್ಷಣಾ ತಂಡಗಳ ಜತೆ ಸ್ಥಳೀಯರು ಕೈಜೋಡಿಸಿದ್ದರು. ಗಾಯಗೊಂಡ ಇಬ್ಬರನ್ನು ಸಮೀಪದ ಅಬ್ಬೋಟ್ಟಾಬಾದ್ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಖೈಬರ್ ಪಖ್ತುಂಖ್ವಾ, ಪಂಜಾಬ್, ಇಸ್ಲಾಮಾಬಾದ್ ಮತ್ತು ಬಲೂಚಿಸ್ತಾದ ಪೂರ್ವಭಾಗಗಳಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಳೆಯ ಮತ್ತು ಭೂಕುಸಿತದ ಎಚ್ಚರಿಕೆ ನೀಡಿದೆ.

× Chat with us